ಪ್ರತಿಯೊಬ್ಬ ಹುಡುಗಿಗೂ 14 ವರ್ಷದ ನಂತರ ಪ್ರತಿ ತಿಂಗಳು ಕಾಣಿಸಿಕೊಳ್ಳುವ ಈ ಮುಟ್ಟ ಹುಡುಗಿಯರಿಗೂ ಮಹಿಳೆಯರಿಗೆ ಮಾನಸಿಕ ನೋವನ್ನುಂಟು ಮಾಡುವದು ಮಾತ್ರವಲ್ಲದೇ ಶಾಲೆ ಕಾಲೇಜಿಗೆ ಹೋಗುವ ಹುಡುಗಿಯರಿಗಂತೂ ಮಾನಸಿಕವಾಗಿ ಕಿರಿಕಿರಿಯಾಗಿ ಖಿನ್ನತೆಗೆ ಒಳಗಾಗುವಂತೆ ಮಾಡುವದು.ಎಷ್ಟೋ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು, ಅತಿಯಾದ ರಕ್ತಸ್ರಾವದಿಂದಾಗಿ ಹೊರಗಡೆ ಹೋಗದೇ ನೋವುಪಡುತ್ತಿರುತ್ತಾರೆ ಸರಿಯಾಗಿ ಊಟ ನಿದ್ರೆ ಕೂಡ ಮಾಡಲು ಆಗದೇ ಬಳಲುತ್ತಿರುತ್ತಾರೆ.ಇದರಿಂದ ಹೆತ್ತವರು ಭಯಬಿತರಾಗಿ ವೈದ್ಯರ ಬಳಿಗೆ ಕರೆದುಕೊಂಡು ಹೋದರೂ ಪ್ರಯೋಜನವಗುವದಿಲ್ಲ.
ಹೊಟ್ಟೆನೋವು ಅತಿಯಾದ ರಕ್ತಸ್ರಾವದಿಂದಾಗಿ ಹೊಟ್ಟೆಯಲ್ಲಿ ಗಡ್ಡೆಗಳಾಗಿ ಕ್ಯಾನ್ಸರನಂತಹ ಭಯಾನಕ ರೋಗಗಳಿಗೆ ಎಷ್ಟೋ ಮಹಿಳೆಯರು ತುತ್ತಾಗಿದ್ದಾರೆ ಆದ್ದರಿಂದ ಮಹಿಳೆಯರು ನಿರ್ಲಕ್ಷಿಸಬಾರದು ಆದಷ್ಟು ಕಾಳಜಿ ವಹಿಸುವದು ಉತ್ತಮ.ರಕ್ತಸ್ರಾವ ಅತಿಯಾದರೆ ಅನಿಮಿಯಾ ಆಗಿ ಅಂಗಾಂಗಗಳ ಮೇಲೆ ಪರಿಣಾಮವಾಗಿ ಹಾರ್ಮೋನು ಏರುಪೇರಾಗಿ ಬಂಜೆತನ ಬರಬಹುದು ಆರೋಗ್ಯವಂತ ಋತುಚಕ್ರ 21-31 ದಿನಗಳಿಗೊಮ್ಮೆ ಆಗಲೇಬೇಕು 31 ದಿನದ ನಂತರ ಆದರೆ ತೊಂದರೆ ಆದ್ದರಿಂದ ವೈದ್ಯರ ಹೋಗಬೇಕು .
ಮುಟ್ಟಿನ ಸಮಯದಲ್ಲಿ ಆಗುವ ಏರುಪೇರು
- ಅತಿಯಾದ ಹೊಟ್ಟೆನೋವು ಕಾಣಿಸಿಕೊಳ್ಳುವದು.
- ಅತಿಯಾದ ರಕ್ತಸ್ರಾವ ಆಗುವದು.
- ತಲೆನೋವು ಬರುವದು.
- ಮೈ ಕೈನೋವೂ ಬರುವದು.
- ಅಶಕ್ತತೆಯಿಂದಾಗಿ ಸಿಟ್ಟು ,ಕೋಪ ಬರುವದು.
- 21 ದಿನಕ್ಕೆ ಮುಂಚೆಯೇ ಮುಟ್ಟು ಆಗುವದು.
- 2-3 ತಿಂಗಳಿಗೊಮ್ಮೆ ಆಗುವದು
- ಮುಟ್ಟಾದಾಗ ಕೆಟ್ಟ ವಾಸನೆ ಬರುವದು ಇದರಿಂದ ಸೋಂಕು ತಗಲುವದು .
- 4-5 ದಿನಗಳವರೆಗೆ ಸಾದಾರಣ ಅತಿ ಹೆಚ್ಚು ದಿನ ರಕ್ತಸ್ರಾವ ಆದರೆ ಅಪಾಯ
- ಪೈಬ್ರಾಯಿಡ್ ಗಡ್ಡೆ ಇದ್ದರೆ ಹೆಚ್ಚು ರಕ್ತಸ್ರಾವ,ಹೊಟ್ಟೆನೋವು,ಸುಸ್ತು ಆಗುವದು ಇದರಿಂದ ಕ್ಯಾನ್ಸೆರ ಬರುವ ಸಾದ್ಯತೆ ಹೆಚ್ಚು.
- ಮದುವೆಯ ನಂತರ ಲೈಂಗಿಕ ಕ್ರಿಯೆಯಲ್ಲಿ ನೋವಾದರೆ ನಿರ್ಲಕ್ಷಿಸಬಾರದು.
- ಬಹಳ ದಿನಗಳವರೆಗೆ ರಕ್ತಸ್ರಾವದೊಂದಿಗೆ ಹೊಟ್ಟೆನೋವು ಬರುತ್ತಿದ್ದರೆ ಅಪಾಯ ಸಕ್ಕರೆ ಖಾಯಿಲೆ,ರಕ್ತಹಿನತೇಯಂತ ರೋಗದಿಂದ ಬಳಲುವದು.
- ದೇಹದ ತೂಕ ಹೆಚ್ಚು ಕಡಿಮೆಯಾಗುವದು
- ಅತಿಯಾದ ಗರ್ಭಪಾತ ಒಳ್ಳೆಯದಲ್ಲ.
ಮುಟ್ಟಿನ ತೊಂದರೆ ನಿವಾರಣೆಗೆ ಪರಿಹಾರಗಳು
- ಮುಟ್ಟಾದಾಗ ಕರಿದಹಾಗೂ ಖಾರದ ಪದಾರ್ಥಗಳನ್ನು ಕಡಿಮೆ ತಿನ್ನುವದು
- ಮಜ್ಜಿಗೆ ಎಳೆನೀರು ಕುಡಿಯುವದು
- ಸ್ವಚ್ಚವಾದ ಬಟ್ಟೆಗಳನ್ನು ಬಳಸುವದು ಸೂಕ್ತ .
- ಪ್ರತಿ ದಿನ 6-7 ಪ್ಯಾಡಗಳನ್ನು ಬಳಸುವದು
- ಸ್ತ್ರೀರೋಗ ವೈದ್ಯರ ಸಲಹೆಯ ಮೆರೆಗೆ ಮಾತ್ರೆ ,ಔಷಧ ತೆಗೆದುಕೊಳ್ಳುವದು ಸೂಕ್ತ .
- ಪ್ರತಿದಿನ ಯೋಗಾ ಭ್ಯಾಸ ಮಾಡುವದು ಒಳ್ಳೆಯದು.
No comments:
Post a Comment