ಆಧುನಿಕ ಯುಗದಲ್ಲಿ ಇಂದು ಪ್ರತಿಯೊಬ್ಬರೂ ಸಿನಿಮಾ ನಟಿಯರಂತೆ ಸ್ಲಿಮ್ ಆಗಿ ದೇಹವನ್ನು ತಳಕು ಬಳಕಿನ ಬಳ್ಳಿಯಂತೆ ಕಾಣಲು ಏನೆಲ್ಲಾ ಹರಸಾಹಸ ಮಾಡುತ್ತಾರೆ ಅಂದರೆ ನಿತ್ಯ ಜಿಮ್ ,ಯೋಗ ವ್ಯಾಯಾಮ ಎಲ್ಲ ಮಾಡಿದರೂ ಪ್ರಯೋಜನವಾಗುವದಿಲ್ಲ ಫೀಟ್ ನೆಸ್ ಗಾಗಿ ವಿವಿಧ ರೀತಿಯ ತಪಸ್ಸು ಮಾಡುತ್ತಾರೆ. ಹಾಗೇ ಪ್ರಸಿದ್ದ ನಟಿಯರಾದ ಕರೀನಾ ,ಪ್ರಿಯಾಂಕ, ದಿಪಿಕ, ಕತ್ರಿನಾ , ರಮ್ಯ ಪಿಟ್ ನೇಸ್ ಗಾಗಿ ದೇಹದ ಫಿಗರ್ ರಹಸ್ಯ ಗ್ರೀನ್ ಟೀ ಯಲ್ಲಿದೆಯಂತೆ ಹಾಗಂತ ನಟಿಯರೇ ಆಗಾಗ ದೇಹ ಸಿರಿಯ ಗುಟ್ಟು ಕೂಡ ಗ್ರೀನ್ ಟೀ ಯಲ್ಲಿದೆಯಂತೆ ಹೇಳುತ್ತಿರುತ್ತಾರೆ ಅವರು ಹೇಳಿದ್ರೂ ಅಂತಲ್ಲ ನಿಜವಾಗಿಯೂ ಈ ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ .ಮಾತ್ರವಲ್ಲ ದೈಹಿಕ ಹಾಗು ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ ದಿನನಿತ್ಯ 2 ಕಪ್ ಗ್ರೀನ್ ಟೀ ಕುಡಿಯುವದರಿಂದ ಮುಖದ ಸೌಂದರ್ಯ ಹೆಚ್ಚುವದಲ್ಲದೆ ದೇಹ ಕಾಂತಿಯುತವಾಗಿ ಕಂಗೊಳಿಸುವದು.ಮನಸ್ಸು ಉಲ್ಲಾಸದಿಂದ ಇರುವದು.ಇದರಿಂದ ದೇಹದ ತೂಕವು ಕಡಿಮೆಯಾಗಿ ಸುಂದರ ಆಕರ್ಷಕವಾಗಿ ಕಾಣುವದು ಹಾಗಂತ ಅತಿಯಾದರೆ ದೇಹಕ್ಕೆ ಒಳ್ಳೆಯದಲ್ಲ ಇತಿಮಿತಿಯಲ್ಲಿದ್ದರೆ ಸೂಕ್ತ.
ಗ್ರೀನ್ ಟೀ ಯಿಂದಾಗುವ ಪ್ರಯೋಜನಗಳು
- ಹೆಚ್ಚಿರುವ ದೇಹದೊಳಗಿನ ಕೊಬ್ಬು ಕರಗಿಸಿ ತೂಕ ಇಳಿಸಲು ಉಪಯುಕ್ತ
- ಸದಾ ಕೊದಲು ಉದುರುತ್ತಿದ್ದರೆ ರಾಮಬಾಣ .
- ಮಧುಮೇಹ ಇದ್ದರೆ ನಿಯಂತ್ರಣಕ್ಕೆ ಸಹಕಾರಿ .
- ದೇಹಕ್ಕೆ ಚೈತನ್ಯ ತುಂಬಿ ಸದಾ ಲವಲವಿಕೆ ಯಿಂದ ಇರಲು ಸಹಾಯಕವಾಗಿದೆ
- ಮಹಿಳೆಯರಿಗೆ ಕಾಡುವ ಗರ್ಭಕೋಶದ ಕ್ಯಾನ್ಸರ್ ಗಡ್ಡೆ ಆಗುವದನ್ನು ತಡೆಯುತ್ತದೆ
- ರಕ್ತ ದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ರಕ್ತನಾಳಗಳ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
- ಗ್ರೀನ್ ಟೀ ಕುಡಿಯುವದರಿಂದ ಮೊಡವೆ ಮತ್ತು ತ್ವಚೆಯ ಸುಕ್ಕು ನಿಯಂತ್ರಣವಾಗುತ್ತದೆ .
- ರೋಗನಿರೋಧಕ ಶಕ್ತಿ ಇರುವದರಿಂದ ಅಲರ್ಜಿ ಸಮಸ್ಯೆಯಿಂದ ಕಾಪಾಡುತ್ತದೆ.

No comments:
Post a Comment