Tuesday 20 December 2011

ದೇಹದತೂಕ ಕಡಿಮೆ ಮಾಡಿಕೊಳ್ಳುವದು ಹೇಗೆ ಗೊತ್ತಾ..?

ಇಂದಿನ ಆಧುನಿಕ ಯುಗದಲ್ಲಿ ಜನತೆ ಅತೀ ಪ್ರಾಮುಖ್ಯತೆ ಕೊಡುತ್ತಿರುವದು ಸೌಂದರ್ಯಕ್ಕೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯ ಹಾಗೆಯೇ ಎಲ್ಲರೂ ಸ್ಲಿಮ್ ಆಗಿ ಸುಂದರವಾಗಿ ಕಾಣಿಸಬೇಕು ಅಂತಾ ಏನೆಲ್ಲಾ ಪ್ರಯತ್ನಿಸ್ತಾರೆ ಅದರಲ್ಲೂ ಯುವತಿಯರು ಸುಂದರವಾಗಿ ಕಾಣಲು ಯೋಗಬ್ಯಾಸಗಳನ್ನು ಮಾಡುತ್ತಿರುತ್ತಾರೆ.ಹಾಗೆಯೇ ದೇಹದ ತೂಕವನ್ನು ಹಿಡಿತದಲ್ಲಿಟ್ಟುಕೊಂಡು ಆಕರ್ಷಕರಾಗಿ ಕಾಣಬಹುದು ಅದರಲ್ಲೂ ದಿನನಿತ್ಯ ಸೇವಿಸುವ ಆಹಾರದಲ್ಲಿ ವ್ಯತ್ಯಾಸವಾದರೆ ದೇಹವು ದೈತ್ಯಾಕಾರವಾಗಿ ಬೆಳೆದು ತೂಕವು ಹೆಚ್ಚುವದು ಇದರಿಂದ ಅಲಸ್ಯತನ,ಮಾನಸಿಕ ತೊಂದರೆ,ದೈಹಿಕ ಆಯಾಸವಾಗಿ ಮಾನಸಿಕವಾಗಿ ಖಿನ್ನರಾಗುವ ಸಾದ್ಯತೆ ಹೆಚ್ಚು.ಅದಕ್ಕಾಗಿ ಮಿತವಾದ ಆಹಾರ ತಿನ್ನುವದು ಆರೋಗಕ್ಕೆ ಉತ್ತಮ.

:ದೇಹದ ತೂಕ ಕಡಿಮೆ ಮಾಡಲು ಕೆಲವು ಟಿಪ್ಸ್ ಗಳು :

1.ದಿನನಿತ್ಯದ ಆಹಾರದಲ್ಲಿ ಕ್ರಮಬದ್ದತ್ತೆ ಇರಬೇಕು.
2.ಕರಿದ ಪದಾರ್ಥಗಳನ್ನು ತಿನ್ನುವದನ್ನು ಕಡಿಮೆಮಾಡುವದು.
3.ಚಹಾ,ಕಾಫಿ ಕುಡಿಯುತ್ತಿದ್ದರೆ ಆದಸ್ಟು ಕಡಿಮೆ ಸಕ್ಕರೆ ಉಪಯೋಗಿಸುವದು.
4.ಕೆಮಿಕಲ್ ಯುಕ್ತ ಜೂಸ್ ಕುಡಿಯುವದನ್ನು ಕಡಿಮೆ ಮಾಡುವದು.
5.ಗಟ್ಟಿಯಾದ ಹಾಲನ್ನು ಸೇವಿಸಬಾರದು.
6.ಸಕ್ಕರೆ ಹೆಚ್ಚಿರುವ ಬಿಸ್ಕೆಟ್,ಸ್ವೀಟ್ ಗಳನ್ನೂ ತಿನ್ನುವದು ಕಡಿಮೆಮಾಡುವದು.
7.ಕುಡಿತ,ಮಾಂಸದ ತಿನ್ನುವ ಚಟವಿದ್ದರೆ ಆದಸ್ಟು ಕಡಿಮೆ ಮಾಡುವದು.
8.ದಿನನಿತ್ಯ ಮುಂಜಾನೆ 1 ಗಂಟೆ ಕಠಿಣ ಯೋಗಾಭ್ಯಾಸಗಳನ್ನು ಮಾಡುವದು.
9.ಹಸಿವಾದಾಗ ಮಾತ್ರ ಮಿತವಾಗಿ ಊಟ ಮಾಡುವದು .
10.ಹೆಚ್ಚು ನಿದ್ದೆ ಮಾಡುವದನ್ನು ಕಡಿಮೆ ಮಾಡುವದು.
11.ಅಲಸ್ಯತನವನ್ನು ಬಿಟ್ಟು ಚಟುವಟಿಕೆಯಿಂದ ಸದಾ ಯಾವುದಾದರು ಕೆಲಸದಲ್ಲಿ ತೊಡಗುವದು
12.ಹೆಚ್ಚು ಹೆಚ್ಚು ಹಸಿಯಾದ ತರಕಾರಿಗಳನ್ನು ತಿನ್ನುವದು.
13.ಪ್ರತಿದಿನ ೨೦ ನಿಮಿಷ ಸ್ಕಿಪ್ಪಿಂಗ್ (ಹಗ್ಗದಾಟ)ಮಾಡುವದು.

ಹೀಗೆಯೇ ಪ್ರತಿದಿನ ನಿಯಮಿತವಾಗಿ ಆಹಾರ ಪದ್ದತಿಯನ್ನು ರೂಢಿಸಿಕೊಂಡು ಹೆಚ್ಚಿನ ಬೇಡವಾದ ಕ್ಯಾಲರಿಯನ್ನು ಬರ್ನ್ ಮಾಡಿ ಅದರೊಂದಿಗೆ ವಿವಿಧ ಭಂಗಿಯ ವ್ಯಾಯಾಮ ಯೋಗಸನಗಳನ್ನು ಮಾಡಿದರೆ ದೇಹದ ತೂಕವು ಕಡಿಮೆಯಗುವದಲ್ಲದೆ ಮುಖದ ಸೌಂದರ್ಯವು ಹೆಚ್ಚುವುದು ಜೊತೆಗೆ ಸ್ಲಿಮ್ ಆಗಿ ಆಕರ್ಷಕವಾಗಿ ಸುಂದರವಾಗಿ ಕಾಣಬಹುದು.

No comments:

Post a Comment