Thursday, 18 October 2012

ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ ....!!!

ಆಧುನಿಕ ಯುಗದಲ್ಲಿ ಇಂದು ಪ್ರತಿಯೊಬ್ಬರೂ  ಸಿನಿಮಾ ನಟಿಯರಂತೆ ಸ್ಲಿಮ್ ಆಗಿ ದೇಹವನ್ನು  ತಳಕು ಬಳಕಿನ ಬಳ್ಳಿಯಂತೆ  ಕಾಣಲು ಏನೆಲ್ಲಾ ಹರಸಾಹಸ ಮಾಡುತ್ತಾರೆ ಅಂದರೆ ನಿತ್ಯ ಜಿಮ್ ,ಯೋಗ ವ್ಯಾಯಾಮ ಎಲ್ಲ ಮಾಡಿದರೂ ಪ್ರಯೋಜನವಾಗುವದಿಲ್ಲ ಫೀಟ್ ನೆಸ್ ಗಾಗಿ ವಿವಿಧ ರೀತಿಯ ತಪಸ್ಸು ಮಾಡುತ್ತಾರೆ. ಹಾಗೇ ಪ್ರಸಿದ್ದ ನಟಿಯರಾದ ಕರೀನಾ ,ಪ್ರಿಯಾಂಕ, ದಿಪಿಕ, ಕತ್ರಿನಾ , ರಮ್ಯ ಪಿಟ್ ನೇಸ್ ಗಾಗಿ ದೇಹದ ಫಿಗರ್ ರಹಸ್ಯ  ಗ್ರೀನ್ ಟೀ ಯಲ್ಲಿದೆಯಂತೆ ಹಾಗಂತ ನಟಿಯರೇ ಆಗಾಗ ದೇಹ ಸಿರಿಯ ಗುಟ್ಟು ಕೂಡ ಗ್ರೀನ್ ಟೀ ಯಲ್ಲಿದೆಯಂತೆ ಹೇಳುತ್ತಿರುತ್ತಾರೆ ಅವರು ಹೇಳಿದ್ರೂ ಅಂತಲ್ಲ ನಿಜವಾಗಿಯೂ ಈ ಗ್ರೀನ್ ಟೀ  ಆರೋಗ್ಯಕ್ಕೆ ಉತ್ತಮ .ಮಾತ್ರವಲ್ಲ ದೈಹಿಕ ಹಾಗು ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ ದಿನನಿತ್ಯ 2 ಕಪ್ ಗ್ರೀನ್ ಟೀ ಕುಡಿಯುವದರಿಂದ ಮುಖದ ಸೌಂದರ್ಯ ಹೆಚ್ಚುವದಲ್ಲದೆ ದೇಹ ಕಾಂತಿಯುತವಾಗಿ ಕಂಗೊಳಿಸುವದು.ಮನಸ್ಸು ಉಲ್ಲಾಸದಿಂದ ಇರುವದು.ಇದರಿಂದ ದೇಹದ ತೂಕವು ಕಡಿಮೆಯಾಗಿ ಸುಂದರ ಆಕರ್ಷಕವಾಗಿ ಕಾಣುವದು ಹಾಗಂತ ಅತಿಯಾದರೆ ದೇಹಕ್ಕೆ ಒಳ್ಳೆಯದಲ್ಲ ಇತಿಮಿತಿಯಲ್ಲಿದ್ದರೆ ಸೂಕ್ತ.

        
  ಗ್ರೀನ್ ಟೀ ಯಿಂದಾಗುವ ಪ್ರಯೋಜನಗಳು  
  • ಹೆಚ್ಚಿರುವ ದೇಹದೊಳಗಿನ ಕೊಬ್ಬು ಕರಗಿಸಿ ತೂಕ  ಇಳಿಸಲು ಉಪಯುಕ್ತ 
  • ಸದಾ ಕೊದಲು ಉದುರುತ್ತಿದ್ದರೆ ರಾಮಬಾಣ .
  • ಮಧುಮೇಹ ಇದ್ದರೆ ನಿಯಂತ್ರಣಕ್ಕೆ ಸಹಕಾರಿ .
  • ದೇಹಕ್ಕೆ ಚೈತನ್ಯ ತುಂಬಿ ಸದಾ ಲವಲವಿಕೆ ಯಿಂದ ಇರಲು ಸಹಾಯಕವಾಗಿದೆ
  • ಮಹಿಳೆಯರಿಗೆ ಕಾಡುವ ಗರ್ಭಕೋಶದ ಕ್ಯಾನ್ಸರ್ ಗಡ್ಡೆ ಆಗುವದನ್ನು ತಡೆಯುತ್ತದೆ 
  • ರಕ್ತ ದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ರಕ್ತನಾಳಗಳ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
  • ಗ್ರೀನ್ ಟೀ ಕುಡಿಯುವದರಿಂದ ಮೊಡವೆ ಮತ್ತು ತ್ವಚೆಯ ಸುಕ್ಕು ನಿಯಂತ್ರಣವಾಗುತ್ತದೆ .
  • ರೋಗನಿರೋಧಕ ಶಕ್ತಿ ಇರುವದರಿಂದ ಅಲರ್ಜಿ ಸಮಸ್ಯೆಯಿಂದ ಕಾಪಾಡುತ್ತದೆ.       

Monday, 10 September 2012

ಮಹಿಳೆಯರಿಗೆ ಮಾನಸಿಕ ನೋವನ್ನುಂಟು ಮಾಡುವ ಮುಟ್ಟು..(ಋತುಚಕ್ರ )


 
 ಪ್ರತಿಯೊಬ್ಬ ಹುಡುಗಿಗೂ  14 ವರ್ಷದ  ನಂತರ  ಪ್ರತಿ ತಿಂಗಳು  ಕಾಣಿಸಿಕೊಳ್ಳುವ ಈ  ಮುಟ್ಟ ಹುಡುಗಿಯರಿಗೂ  ಮಹಿಳೆಯರಿಗೆ ಮಾನಸಿಕ ನೋವನ್ನುಂಟು  ಮಾಡುವದು ಮಾತ್ರವಲ್ಲದೇ ಶಾಲೆ ಕಾಲೇಜಿಗೆ ಹೋಗುವ ಹುಡುಗಿಯರಿಗಂತೂ ಮಾನಸಿಕವಾಗಿ  ಕಿರಿಕಿರಿಯಾಗಿ ಖಿನ್ನತೆಗೆ ಒಳಗಾಗುವಂತೆ ಮಾಡುವದು.ಎಷ್ಟೋ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು, ಅತಿಯಾದ ರಕ್ತಸ್ರಾವದಿಂದಾಗಿ ಹೊರಗಡೆ ಹೋಗದೇ  ನೋವುಪಡುತ್ತಿರುತ್ತಾರೆ ಸರಿಯಾಗಿ  ಊಟ ನಿದ್ರೆ ಕೂಡ ಮಾಡಲು ಆಗದೇ ಬಳಲುತ್ತಿರುತ್ತಾರೆ.ಇದರಿಂದ ಹೆತ್ತವರು ಭಯಬಿತರಾಗಿ ವೈದ್ಯರ ಬಳಿಗೆ ಕರೆದುಕೊಂಡು  ಹೋದರೂ ಪ್ರಯೋಜನವಗುವದಿಲ್ಲ.
 ಹೊಟ್ಟೆನೋವು ಅತಿಯಾದ ರಕ್ತಸ್ರಾವದಿಂದಾಗಿ ಹೊಟ್ಟೆಯಲ್ಲಿ ಗಡ್ಡೆಗಳಾಗಿ ಕ್ಯಾನ್ಸರನಂತಹ  ಭಯಾನಕ ರೋಗಗಳಿಗೆ ಎಷ್ಟೋ  ಮಹಿಳೆಯರು ತುತ್ತಾಗಿದ್ದಾರೆ ಆದ್ದರಿಂದ  ಮಹಿಳೆಯರು  ನಿರ್ಲಕ್ಷಿಸಬಾರದು ಆದಷ್ಟು ಕಾಳಜಿ ವಹಿಸುವದು ಉತ್ತಮ.ರಕ್ತಸ್ರಾವ ಅತಿಯಾದರೆ ಅನಿಮಿಯಾ ಆಗಿ ಅಂಗಾಂಗಗಳ ಮೇಲೆ ಪರಿಣಾಮವಾಗಿ  ಹಾರ್ಮೋನು ಏರುಪೇರಾಗಿ ಬಂಜೆತನ ಬರಬಹುದು  ಆರೋಗ್ಯವಂತ ಋತುಚಕ್ರ 21-31 ದಿನಗಳಿಗೊಮ್ಮೆ ಆಗಲೇಬೇಕು 31 ದಿನದ ನಂತರ ಆದರೆ ತೊಂದರೆ ಆದ್ದರಿಂದ ವೈದ್ಯರ ಹೋಗಬೇಕು .

                         ಮುಟ್ಟಿನ ಸಮಯದಲ್ಲಿ  ಆಗುವ  ಏರುಪೇರು 
  • ಅತಿಯಾದ  ಹೊಟ್ಟೆನೋವು ಕಾಣಿಸಿಕೊಳ್ಳುವದು.
  • ಅತಿಯಾದ ರಕ್ತಸ್ರಾವ ಆಗುವದು. 
  • ತಲೆನೋವು ಬರುವದು. 
  • ಮೈ ಕೈನೋವೂ ಬರುವದು. 
  • ಅಶಕ್ತತೆಯಿಂದಾಗಿ ಸಿಟ್ಟು ,ಕೋಪ   ಬರುವದು. 
  • 21 ದಿನಕ್ಕೆ ಮುಂಚೆಯೇ  ಮುಟ್ಟು ಆಗುವದು.
  • 2-3 ತಿಂಗಳಿಗೊಮ್ಮೆ ಆಗುವದು    
       ಮುಟ್ಟಿನ  ಏರುಪೇರುನಿಂದಾಗುವ  ಪರಿಣಾಮಗಳು 
  • ಮುಟ್ಟಾದಾಗ ಕೆಟ್ಟ ವಾಸನೆ ಬರುವದು  ಇದರಿಂದ ಸೋಂಕು ತಗಲುವದು .
  • 4-5 ದಿನಗಳವರೆಗೆ     ಸಾದಾರಣ ಅತಿ ಹೆಚ್ಚು ದಿನ ರಕ್ತಸ್ರಾವ ಆದರೆ ಅಪಾಯ 
  • ಪೈಬ್ರಾಯಿಡ್  ಗಡ್ಡೆ   ಇದ್ದರೆ ಹೆಚ್ಚು ರಕ್ತಸ್ರಾವ,ಹೊಟ್ಟೆನೋವು,ಸುಸ್ತು ಆಗುವದು ಇದರಿಂದ ಕ್ಯಾನ್ಸೆರ ಬರುವ ಸಾದ್ಯತೆ  ಹೆಚ್ಚು.
  • ಮದುವೆಯ ನಂತರ ಲೈಂಗಿಕ ಕ್ರಿಯೆಯಲ್ಲಿ ನೋವಾದರೆ ನಿರ್ಲಕ್ಷಿಸಬಾರದು.
  • ಬಹಳ ದಿನಗಳವರೆಗೆ ರಕ್ತಸ್ರಾವದೊಂದಿಗೆ ಹೊಟ್ಟೆನೋವು ಬರುತ್ತಿದ್ದರೆ ಅಪಾಯ ಸಕ್ಕರೆ ಖಾಯಿಲೆ,ರಕ್ತಹಿನತೇಯಂತ ರೋಗದಿಂದ ಬಳಲುವದು.
  • ದೇಹದ  ತೂಕ ಹೆಚ್ಚು ಕಡಿಮೆಯಾಗುವದು   
  • ಅತಿಯಾದ ಗರ್ಭಪಾತ ಒಳ್ಳೆಯದಲ್ಲ.  
                          ಮುಟ್ಟಿನ ತೊಂದರೆ ನಿವಾರಣೆಗೆ ಪರಿಹಾರಗಳು 
  • ಮುಟ್ಟಾದಾಗ ಕರಿದಹಾಗೂ ಖಾರದ ಪದಾರ್ಥಗಳನ್ನು ಕಡಿಮೆ ತಿನ್ನುವದು 
  • ಮಜ್ಜಿಗೆ ಎಳೆನೀರು ಕುಡಿಯುವದು 
  • ಸ್ವಚ್ಚವಾದ  ಬಟ್ಟೆಗಳನ್ನು ಬಳಸುವದು ಸೂಕ್ತ .
  • ಪ್ರತಿ ದಿನ 6-7 ಪ್ಯಾಡಗಳನ್ನು ಬಳಸುವದು
  • ಸ್ತ್ರೀರೋಗ ವೈದ್ಯರ ಸಲಹೆಯ ಮೆರೆಗೆ ಮಾತ್ರೆ ,ಔಷಧ ತೆಗೆದುಕೊಳ್ಳುವದು ಸೂಕ್ತ . 
  •  ಪ್ರತಿದಿನ ಯೋಗಾ ಭ್ಯಾಸ ಮಾಡುವದು ಒಳ್ಳೆಯದು. 
  ಇಂದು ವಯಸ್ಸಾಗಿರುವ   ಮಹಿಳೆಯರಿಗೆ 42-45 ಕೂ ಮುಟ್ಟಿನ ತೊಂದರೆಯಾದಾಗ ಬೇಗ ಚಿಕಿತ್ಸೆ ಪಡೆಯಬೇಕು ಆದ್ದರಿಂದ ಮಹಿಳೆಯರೂ ಆದಸ್ಟು ಕಾಳಜಿ ವಹಿಸುವದು ಒಳ್ಳೆಯದು.